Wednesday, April 29, 2015

ದೆವ್ವದ ಪೆಟ್ಟಿಗೆ

ಬಹುರಾಷ್ಟೀಯ ಕಂಪನಿಯೊಂದು
ಸುಂದರ ಪೆಟ್ಟಿಗೆ
ಹೊರಗಿಂದ ನೋಡುವವರಿಗೆ
ಗಲ್ಲಾ ಪೆಟ್ಟಿಗೆ
ಒಳಹೊಕ್ಕುವ ಮೊದಲು
ಮಾಯಾ ಪೆಟ್ಟಿಗೆ
ಹೊಕ್ಕಮೇಲೆ ತಿಳಿಯುವುದು
ಇದೊಂದು ದೆವ್ವದ ಪೆಟ್ಟಿಗೆ

ಒಳ ಹೊಕ್ಕಮೇಲೆ ಬಂಧಿಸುವುದು
ಮನವ ಮಾಯಾಜಾಲದಿ
ಬಿಟ್ಟೆನೆಂದರೂ ಬಿಡದೆ ಕಾಡುವುದು
ಆರ್ತನಾದದಿ
ಉಸಿರುಕಟ್ಟಿಸುವುದು ಕೊಳೆತ ಆತ್ಮಗಳ
ದುರ್ನಾತದಿ
ಬೆಚ್ಚಿಬೀಳಿಸುವುದು ಅತೃಪ್ತ ಆತ್ಮಗಳ
ಚೀರಾಟದಿ
ಸಮಾಧಾನಿಸುವುದು ತಿಂಗಳ ಕೊನೆಯ
ಬ್ಯಾಂಕ್ ಸಂದೇಶದಿ

ಇಂತಿ,
                     ಕವಿತಾ ಗೋಪಿಕುಂಟೆ

2 comments:

  1. MNOಗಳು ಮಾಯೆಯ ಬಲೆಗಳು, ನಿಜ ಕಣ್ರೀ ನಿಜ...

    ReplyDelete
  2. ಹೌದು ಬದರಿ ಸರ್,
    MNC ಒಳಗೆ ಬರೋವರೆಗೂ ಇಲ್ಲಿಗೆ ಬರೋದೆ ದೊಡ್ಡ ಸಾದನೆ ಅನಿಸುತ್ತೆ. ಒಳಗೆ ಬಂದಮೇಲೆ, ದುಡ್ಡು ಒಂದು ಬಿಟ್ರೆ ಏನು ಇಲ್ಲ ಇಲ್ಲಿ, ಎಲ್ಲಾನು ಕಳ್ ಕೊತಿವಿ ಅಂತ ಗೊತ್ತಗೊಹೊತ್ತಿಗೆ ಸಮಯ ಮೀರಿರುತ್ತೆ. ಆಮೇಲೆ ಹೊರಗೆ ಹೋಗ್ಬೇಕು ಅಂದ್ರು ಹೊರಗೆ ಬರೋಕೆ ಆಗೋಲ್ಲ.

    ReplyDelete

Note: Only a member of this blog may post a comment.