ಸಾವಿರಾರು ಕನಸುಗಳು ಸಾಲುಗಟ್ಟಿ ನಿಂತಿರುವಾಗ
ಆಸೆಗಳೆಲ್ಲವೂ ಕನಸುಗಳನು ಹಿಂಬಾಲಿಸುತಿರುವಾಗ
ನಾ ಕಂಡ ಕನಸುಗಳೆಲ್ಲವ
ಒಂದೇ ದಿನದಲಿ ಹೇಳಿಬಿಡೆಂದರೆ ಹೇಗೆ..?
ನನ್ನೆಲ್ಲಾ ಆಸೆಗಳ
ಒಂದೇ ಉಸಿರಲಿ ಹೇಳಿಬಿಡೆಂದರೆ ಹೇಗೆ..?
ಎಲ್ಲಾ ಕನಸುಗಳಿಗೆ ರೆಕ್ಕೆ ಪುಕ್ಕ ನೀಡಲಾಗದಿರುವಾಗ
ಎಲ್ಲಾ ಆಸೆಗಳಿಗೆ ಜೀವ ತುಂಬಲಾಗದಿರುವಾಗ
ಪದಗಳೆ ನಿಲುಕದ ಕನಸುಗಳಿರುವಾಗ
ಭಾಷೆಯೇ ಅರಿಯದ ಆಸೆಗಳಿರುವಾಗ
ಎಲ್ಲವನ್ನು ಹೇಳಿಬಿಡೆಂದರೆ ಹೇಗೆ..?
ಪ್ರತಿದಿನವು ಹೊಸ ಕನಸುಗಳು ಜನಿಸುವಾಗ
ಪ್ರತಿಕ್ಷಣವು ಹೊಸ ಆಸೆಗಳು ಮೂಡುವಾಗ
ಎಲ್ಲಾ ಹೇಳಿ ಮುಗಿಸಿಬಿಡೆಂದರೆ ಹೇಗೆ..?
ಇಂತಿ,
ಕವಿತಾ ಗೋಪಿಕುಂಟೆ
ಆಸೆಗಳೆಲ್ಲವೂ ಕನಸುಗಳನು ಹಿಂಬಾಲಿಸುತಿರುವಾಗ
ನಾ ಕಂಡ ಕನಸುಗಳೆಲ್ಲವ
ಒಂದೇ ದಿನದಲಿ ಹೇಳಿಬಿಡೆಂದರೆ ಹೇಗೆ..?
ನನ್ನೆಲ್ಲಾ ಆಸೆಗಳ
ಒಂದೇ ಉಸಿರಲಿ ಹೇಳಿಬಿಡೆಂದರೆ ಹೇಗೆ..?
ಎಲ್ಲಾ ಕನಸುಗಳಿಗೆ ರೆಕ್ಕೆ ಪುಕ್ಕ ನೀಡಲಾಗದಿರುವಾಗ
ಎಲ್ಲಾ ಆಸೆಗಳಿಗೆ ಜೀವ ತುಂಬಲಾಗದಿರುವಾಗ
ಪದಗಳೆ ನಿಲುಕದ ಕನಸುಗಳಿರುವಾಗ
ಭಾಷೆಯೇ ಅರಿಯದ ಆಸೆಗಳಿರುವಾಗ
ಎಲ್ಲವನ್ನು ಹೇಳಿಬಿಡೆಂದರೆ ಹೇಗೆ..?
ಪ್ರತಿದಿನವು ಹೊಸ ಕನಸುಗಳು ಜನಿಸುವಾಗ
ಪ್ರತಿಕ್ಷಣವು ಹೊಸ ಆಸೆಗಳು ಮೂಡುವಾಗ
ಎಲ್ಲಾ ಹೇಳಿ ಮುಗಿಸಿಬಿಡೆಂದರೆ ಹೇಗೆ..?
ಇಂತಿ,
ಕವಿತಾ ಗೋಪಿಕುಂಟೆ
ಸಕಾರಾತ್ಮಕ ಕನಸುಗಳು ಹುಟ್ಟುತಿರಲಿ ಅನುಕ್ಷಣ.
ReplyDeleteಕನಸುಗಳ ಹುಟ್ಟು ಸಾವು ನಿರಂತರ ಬದರಿ ಸರ್ :)...
Delete