Tuesday, March 20, 2012

ಬಾಳ ಸಂತೆಯಲಿ ...


ಬಾಳ ಸಂತೆಯಲಿ
ಯಾರಿಗಿಲ್ಲ ಚಿಂತೆ
ಎಲ್ಲರಿಗು ಇಹುದಿಲ್ಲಿ
ನೋವು ನಲಿವುಗಳ ಕಂತೆ

ಹುಟ್ಟಿರುವುದಕು ಚಿಂತೆ
ಸಾಯುವುದಕು ಚಿಂತೆ
ನಡುವೆ ಇರುವ ಮೂರು
ದಿನಗಳ ಕಳೆಯುವುದಕು ಚಿಂತೆ

ಕೆಲವರಿಗೆ ಇಂದಿನ ಚಿಂತೆ
ಕೆಲವರಿಗೆ ಮುಂದಿನ ಚಿಂತೆ
ಮತ್ತೆ ಕೆಲವರಿಗೆ ಹಿಂದಿನ ಚಿಂತೆ
ಎಲ್ಲರಿಗು ಇಹುದಿಲ್ಲಿ ಕಂತೆಗಳ ಚಿಂತೆ

ಒಂದಿಷ್ಟು ಮಂದಿಗೆ ಅವರವರ ಚಿಂತೆ
ಮತ್ತಷ್ಟು ಮಂದಿಗೆ ಬೇರೆಯವರ ಚಿಂತೆ
ಅವರವರ ಚಿಂತೆಗೆ ಅರ್ಥವಿದೆ ಕಂತೆಯಲಿ
ಬೇರೆಯವರ ಚಿಂತೆಯಲಿ ಏನಿಹುದು ನಾನರಿಯೆ

ಚಿಂತೆಗಳ ಕಂತೆಯಿಂದಿದೆ ಚಿತೆ
ಎಣಿಸಿದಷ್ಟು ಮುಗಿಯದು
ಕಂತೆಗಳ ಸಂಖ್ಯೆ
ಎಣಿಸುತ್ತ  ಎಣಿಸುತ್ತ ಚಿತೆಯ ಅಪ್ಪುವವರೆಷ್ಟು ಜನ

ಚಿಂತೆಗಳ ಕಂತೆಗಳನು ಎಣಿಸದೆ
ಬದುಕುವವ ನಿಜವಾದ ಜಾಣ
ಜಾಣತನವ ಅರಿಯಲು
ಬೇಕು ಒಂದಿಷ್ಟು ಚಿಂತೆ

ಸಂತೆಗೂ ಚಿಂತೆಗೂ ಇಹುದಿಲ್ಲಿ ಸಂಬಂಧ
ಸಂತೆಯಿಲ್ಲದೆ ಚಿಂತೆಯಿಲ್ಲ
ಚಿಂತೆಯಿಲ್ಲದೆ ಸಂತೆಯಿಲ್ಲ
ಇದನರಿತು ಬಾಳು ನೀ ಬಾಳ ಸಂತೆಯಲಿ

                                              ಇಂತಿ
                                                        ಕವಿತಾ ಗೌಡ

2 comments:

  1. ಚಿಂತೆಯೇ ಚಿತೆ ಹತ್ತಿಸುತ್ತದೆ ಎಂಬ ಮಾತಿದೆ..
    ಬಾಳಲ್ಲಿನ ಚೆಂತೆಯ ಬಗ್ಗೆ ಚೆನ್ನಾಗಿ ಬರೆದಿದ್ದೀರಿ...

    ಉಗಾದಿಯ ಶುಭಾಶಯಗಳು...

    ReplyDelete
  2. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
    ನಿಮಗೂ ಕೂಡ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು

    ReplyDelete

Note: Only a member of this blog may post a comment.