Sunday, February 12, 2012

ನನಗೂ ಜಡೆ ಹಾಕುವ ಆಸೆ ...

ಪುಟ್ಟದೊಂದು ಜುಟ್ಟು ಕಟ್ಟಿ ಇಲ್ಲಾಂದ್ರೆ ಸಣ್ಣದೊಂದು ಕ್ಲಿಪ್ ಹಾಕಿ ಹೂಡಾಡ್ತಿದ್ದ ನನಗೆ ಮೊನ್ನೆ ಮೊನ್ನೆ ಯಾಕೋ ಜಡೆ ಹಾಕ್ಕೋಬೇಕು ಅಂತ ಆಸೆ ಆಯಿತು. ಇರೋ ಚೋಟುದ್ದ ಕೂದಲನ್ನ ಹಿಡ್ಕೊಂಡು ಜಡೆ ಹಾಕಕೆ ಹೋದರೆ ಹಾಗೆ ಕಳಚಿ ಬಿತ್ತು. ನನ್ನ ಆಸೆಗೆ ತಣ್ಣೀರು ಎರಚಿದ ಹಾಗೆ ಆಯಿತು.
ಅಂದ ಹಾಗೆ ಇಂತ ಒಂದು ಅಪರೂಪದ ಆಸೆ ಯಾಕೆ ಬಂತು ಅಂತಿರಾ...?    
ಏನಿಲ್ಲ ರೀ ಮೊನ್ನೆ ನಮ್ಮ ಆಫೀಸ್ ಕ್ಯಾಂಟೀನ್ ನಲ್ಲಿ ಒಂದು ಕಪ್ ಕಾಫಿ ತಗೊಂಡು ಒಂದು ಹಿಂಡು ಹುಡುಗಿಯರ ಮಧ್ಯೆ ಹರಟೆ ಹೊಡಿತಾ ಕೂತಿದ್ದೆ. ಅವತ್ತು ನಮ್ಮ ಹರಟೆ ಟಾಪಿಕ್ ಕೂದಲಿನ ಬಗ್ಗೆನೆ ಹಾಗಿತ್ತು. ಹಾಗೆ ಹರಟೆ ಹೊಡಿತಾ ಇದ್ದಾಗ ಥಟ್ ಅಂತ ಒಂದು ಹುಡುಗಿ ಕಣ್ಣಿಗೆ ಬಿದ್ಲು ಅವಳ ಹಿಂದೆ ನಾಗರಹಾವು ...!
ಭಯ ಪಡ್ಕೋಬೇಡ್ರಿ.. ನಾಗರ ಹಾವಲ್ಲ ನಾಗರ ಹಾವಿನ ತರ ಉದ್ದ ಅದರಸ್ಟೇ ದಪ್ಪ ಇರೋ ಜಡೆ ನೋಡಿದೆ. ಕಪ್ಪು ಕೂದಲು ಲೈಟ್ ಬೆಳಕಿಗೆ ಪಳ ಪಳ ಅಂತ ಹೊಳಿತಾ ಇತ್ತು. ಯಾಕೋ ಏನೋ ಮೌನವಾಗಿ ಜಡೆನೆ ನೋಡ್ತಾ ಕೂತ್ ಬಿಟ್ಟೆ. ಅವಗ್ಲೆ ರೀ ನಂಗು, ನಾ ಜಡೆ ಹಾಕೋಬೇಕು ಅಂತ ಹೊಸ ಆಸೆ ಹುಟ್ಟಿದ್ದು.
ಯಾರಿಗೆ ಎಲ್ಲಿ ಬೇಕಿದ್ರೂ ಜ್ಞಾನೋದಯ ಆಗಬಹುದು ಅಲ್ವೇನ್ರಿ.ಅದೇ ನಮ್ಮ ಗೌತಮ ಬುದ್ದರಿಗೆ ಅರಳಿ ಮರದ ಕೆಳಗೆ ಜ್ಞಾನೋದಯ ಆಯಿತಂತಲ್ವ ಅಂಗೆ.
ನನಗೆ ನಮ್ ಆಫೀಸ್ ಕ್ಯಾಂಟೀನ್ ನಲ್ಲಿ ಪುಟ್ಟದೊಂದು ಹೊಸ ಆಸೆ ಹುಟ್ಟಿದೆ. ನನ್ನ ಆಸೆ ಪೂರೈಸೋಕೆ ವಾರಕ್ಕೆ ಒಂದು ದಿನ ಎಣ್ಣೆ ಕಾಣ್ತಿದ್ದ ತಲೆಗೆ ಪ್ರತಿದಿನ ಎಣ್ಣೆ ಹಾಕ್ತಿದೀನಿ
ಕರಿಬೇವು ನೆಲ್ಲಿಕಾಯಿ ಎಲ್ಲ ತಿನ್ನೋಕೆ ಶುರು ಮಾಡಿದಿನಿ ನೋಡೋಣ ನಾನು ಒಂದಿನ ಹಾವಿನ ತರ ಜಡೆ ಹಾಕೊತಿನಾ ಅಂತ

                                                          ಇಂತಿ
                                                                    ಕವಿತಾ ಗೌಡ 

No comments:

Post a Comment

Note: Only a member of this blog may post a comment.